ಲೋಪಗಳ ಕಾರಣ ಯಮಹಾ ಬೈಕ್ ರೀಕಾಲ್

ಕಾರು ಕಂಪನಿಗಳಿಗೆ ತಲೆನೋವಾಗಿ ಪರಿಣಮಿಸಿದ್ದ ರೀಕಾಲ್ ಪ್ರಕ್ರಿಯೆ, ಈಗ ಬೈಕ್ ಗಳಿಗೂ ವಿಸ್ತರಿಸಿದೆ. ಇಂಧನ ಟ್ಯಾಂಕ್ ಬ್ರಾಕೆಟ್, ಮೈನ್ ಸ್ವಿಚ್ ಸಬ್ ಅಸೆಂಬ್ಲಿಯಲ್ಲಿ ಲೋಪಗಳಿರುವ ಕಾರಣ ಯಮಹಾ ಇಂಡಿಯಾ ತನ್ನ ಪ್ರಸಿದ್ದ YZF-R3 ಬೈಕ್ ಗಳನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಪ್ರಕಟಿಸಿದೆ. ಒಟ್ಟು 1,155 YZF-R3 ಬೈಕ್ ಗಳನ್ನು ಯಮಹಾ ಹಿಂತೆಗೆದುಕೊಂಡಿದೆ. ಗ್ರಾಹಕರ ಭದ್ರತೆಗೆ ಕಟ್ಟುಬಿದ್ದಿರುವುದಾಗಿ ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಲೋಪಗಳುಳ್ಳ ಭಾಗಗಳನ್ನು ಹೊಸ ಭಾಗಗಳೊಂದಿಗೆ ಬದಲಾಯಿಸುವುದಾಗಿ ಕಂಪನಿ ಹೇಳಿದೆ.  ಎಲ್ಲಾ ಯಮಹಾ ಡೀಲರ್ಷಿಪ್ ಗಳಲ್ಲಿ ಉಚಿತವಾಗಿ ದೋಷಪೂರಿತ ಭಾಗಗಳನ್ನು ಬದಲಿಸಿಕೊಡುವುದಾಗಿ ಪ್ರಕಟಣೆ ತಿಳಿಸಿದೆ. ರಿಪ್ಲೇಸ್ಮೆಂಟ್ ಪ್ರಕ್ರಿಯೆ ಕೂಡಲೇ ಆರಂಭಿಸಲಾಗುತ್ತದೆ, ಇದಕ್ಕೆ ಸಂಬಂಧಿಸಿದಂತೆ ಕಂಪನಿಯೇ ನೇರವಾಗಿ ಗ್ರಾಹಕರನ್ನು ಸಂಪರ್ಕಿಸುತ್ತದೆ ಎಂದು ಯಮಹಾ ಇಂಡಿಯಾ ಹೇಳಿದೆ. ಕಳೆದ ವರ್ಷ ಜೂನ್ ನಲ್ಲಿ ಸಹಾ ಯಮಹಾ 902 YZF-R3 ಬೈಕ್ ಗಳನ್ನು ರೀಕಾಲ್ ಮಾಡಿತ್ತು. ಕೆಲ YZF-R3 ಮೋಟಾರ್ ಬೈಕ್ ಗಳಲ್ಲಿ ದೋಷಗಳು ಕಂಡುಬಂದಿದ್ದರಿಂದ ಕಂಪನಿ ಈ ಬೈಕ್ ಗಳ ಉತ್ಪಾದನೆಯನ್ನು ಕಡಿಮೆ ಮಾಡಿದೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache