ಯಶ್, ರಾಧಿಕಾ ವಿವಾಹ: ಅಭಿಮಾನಿಗಳಿಗೆ ಔತಣಕೂಟ

ಸ್ಯಾಂಡಲ್ ವುಡ್ ನ ಖ್ಯಾತ ನಟ ಯಶ್ ಮತ್ತು ಮೊಗ್ಗಿನ ಮನಸು ಹುಡುಗಿ ರಾಧಿಕಾ ಪಂಡಿತ್ ಅವರ ವಿವಾಹ ಮಹೋತ್ಸವ ಶುಕ್ರವಾರ ತಾಜ್ ವೆಸ್ಟೆಮಡ್ ಸೋಮನಾಥೇಶ್ವರ ಮಂಟಪದಲ್ಲಿ ನೆರವೇರಿತು. ಕನ್ನಡ ಚಿತ್ರರಂಗ ಗಣ್ಯರು ಮತ್ತು ಪ್ರಮುಖ ರಾಜಕಾರಣಿಗಳು ಸೇರಿದಂತೆ ಹಲವರು ಹಾಜರಾಗಿ ವಧೂ ವರರನ್ನು ಆಶೀರ್ವದಿಸಿದರು.

ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದ ಶ್ರೀಗಳು, ಮಾಜಿ ಸಿಎಂ ಎಸ್.ಎಂ.ಕೃಷ್ಣ, ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಮುಂತಾದವರು ಹಾಜರಿದ್ದರು.

ಭಾನುವಾರ ಚಿತ್ರರಂಗದ ಕಾರ್ಮಿಕರು ಮತ್ತು ಅಭಿಮಾನಿಗಳಿಗಾಗಿ ವಿಶೇಷವಾಗಿ ಔತಣಕೂಟ ಆಯೋಜಿಸಲಾಗಿದೆ.