ಯಡಿಯೂರಪ್ಪ ನಿವಾಸದಲ್ಲಿ ದಲಿತ ಕುಟುಂಬಗಳಿಗೆ ಆತಿಥ್ಯ – News Mirchi

ಯಡಿಯೂರಪ್ಪ ನಿವಾಸದಲ್ಲಿ ದಲಿತ ಕುಟುಂಬಗಳಿಗೆ ಆತಿಥ್ಯ

ತಮ್ಮ ಮೇಲೆ ಎಷ್ಟೇ ಟೀಕೆಗಳು ಬಂದರೂ ದಲಿತರ ಮನೆಗಳಿಗೆ ಹೋಗುವುದು ಬಿಡೋಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಮೇ ತಿಂಗಳಲ್ಲಿ ಕೈಗೊಂಡ ಪ್ರವಾಸದ ವೇಳೆ ಹಲವು ದಲಿತರ ಮನೆಗಳಿಗೆ ಭೇಟಿ ನೀಡಿ ಅವರ ಮನೆಗಳಲ್ಲಿ ಯಡಿಯೂರಪ್ಪ ಮಾಡಿದ್ದರು. ಆ ಸಂದರ್ಭದಲ್ಲಿ ತಮ್ಮನ್ನು ಪ್ರೀತಿಯಿಂದ ಆದರಿಸಿದವರಿಗೆ ಕೃತಜ್ಞತೆಯಾಗಿ ಸೋಮವಾರ ಡಾಲರ್ಸ್ ಕಾಲನಿಯಲ್ಲಿನ ತಮ್ಮ ನಿವಾಸಕ್ಕೆ ಆ ದಲಿತ ಕುಟುಂಬಗಳನ್ನು ಆಹ್ವಾನಿಸಿದ್ದರು. ವಿವಿಧ ಜಿಲ್ಲೆಗಳಿಗೆ ಒಟ್ಟು 33 ದಲಿತ ಕುಟುಂಬಗಳ ಸುಮಾರು 100 ಜನ ಈ ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು.

ನಾನು ನಿಮ್ಮ ಮನೆಗಳಿಗೆ ಬಂದಾಗಿ ನೀವು ನೀಡಿದ ಆತಿಥ್ಯವನ್ನು ಮರೆಯಲಾರೆ. ಅಷ್ಟು ಬಡತನದಲ್ಲೂ ಕೂಡಾ ನನ್ನ ಆತಿಥ್ಯಕ್ಕಾಗಿ ನೀವು ಪಟ್ಟ ಕಷ್ಟ ಹತ್ತಿರದಿಂದ ನೋಡಿದ್ದೇನೆ ಎಂದು ದಲಿತ ಕುಟುಂಬಗಳನ್ನು ಉದ್ದೇಶಿಸಿ ಯಡಿಯೂರಪ್ಪ ಮಾತನಾಡಿದರು. ಅದೇ ವೇಳೆ ತಮ್ಮ ಪ್ರವಾಸದ ಸಂದರ್ಭದಲ್ಲಿ ರಾಜಕೀಯ ಟೀಕೆ ಮಾಡುವವರಿಗೆ ತಿರುಗೇಟು ನೀಡಿದ ಅವರು, ಯಾರು ಎಷ್ಟೇ ಟೀಕಿಸಲಿ, ದಲಿತರ ಮನೆಗಳಿಗೆ ಭೇಟಿ ನೀಡುವುದು ನಿಲ್ಲಿಸಲು ಯಾರಿಂದಲೂ ಆಗದು ಎಂದರು.

Loading...