ಉತ್ತರಪ್ರದೇಶದ ಸರ್ಕಾರಿ ಕಛೇರಿಗಳಲ್ಲಿ ಗುಟ್ಕಾ ನಿಷೇಧ – News Mirchi

ಉತ್ತರಪ್ರದೇಶದ ಸರ್ಕಾರಿ ಕಛೇರಿಗಳಲ್ಲಿ ಗುಟ್ಕಾ ನಿಷೇಧ

ಅಕ್ರಮ ಕಸಾಯಿಖಾನೆಗಳಿಗೆ ಕಡಿವಾಣ ಹಾಕಲು ಕ್ರಿಯಾ ಯೋಜನೆ ರೂಪಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ ನಂತರ, ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಿ ಕಚೇರಿಗಳಲ್ಲಿ ಪಾನ್ ಮಸಾಲಾ, ಗುಟ್ಕಾ ಜಗಿಯುವುದನ್ನು ನಿಷೇಧಿಸಿದ್ದಾರೆ.

ಹಳೆಯ ಕಟ್ಟಡದಲ್ಲಿದ್ದ ಸರ್ಕಾರಿ ಕಛೇರಿಗೆ ಭೇಟಿ ನೀಡಿದ್ದ ವೇಳೆ ಅವರನ್ನು ಸ್ವಾಗತಿಸಿದ್ದು ಕಛೇರಿಯ ಗೋಡೆ ಮತ್ತು ಮೆಟ್ಟಿಲುಗಳ ಮೇಲೆ ಉಗಿಯಲಾಗಿದ್ದ ಗುಟ್ಕಾ ಕಲೆಗಳು. ಹಾಗಾಗಿ ಅವರು ಈ ನಿಷೇಧಕ್ಕೆ ಮುಂದಾಗಿದ್ದಾರೆ.

Loading...

Leave a Reply

Your email address will not be published.