ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಮೀಸಲಾತಿಗೆ ಬ್ರೇಕ್ ಹಾಕಿದ ಯೋಗಿ – News Mirchi

ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಮೀಸಲಾತಿಗೆ ಬ್ರೇಕ್ ಹಾಕಿದ ಯೋಗಿ

ಉತ್ತರ ಪ್ರದೇಶದ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಕೋಟಾ ಆಧಾರಿತ ಮೀಸಲಾತಿಗಳಿಗೆ ಇತಿಶ್ರೀ ಹಾಡುತ್ತಿರುವುದಾಗಿ ಯೋಗಿ ಆದಿತ್ಯನಾಥ್ ಸರ್ಕಾರ ಪ್ರಕಟಿಸಿದೆ. ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡಗಳು (ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಅಭ್ಯರ್ಥಿಗಳಿಗೆ ಇದ್ದ ಮೀಸಲಾತಿಯನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಅತಿ ಕಡಿಮೆ ಅವಧಿಯಲ್ಲೇ ಯೋಗಿ ಆದಿತ್ಯನಾಥ್ ಸರ್ಕಾರ ತಮ್ಮ ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು, ಭ್ರಷ್ಟಾಚಾರ ಕೊನೆಗೊಳಿಸಲು, ರಾಜ್ಯದಲ್ಲಿ ಆಡಳಿತ ಸುಧಾರಣೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. [ಪುಸ್ತಕ ಬಿಡುಗಡೆ ಮಾಡಿದ ಮೋದಿ ಪ್ಯಾಕಿಂಗ್ ಕವರ್ ಏನು ಮಾಡಿದರು ಗೊತ್ತೇ?]

ಶಿಕ್ಷಣ ಗುಣಮಟ್ಟ ಸುಧಾರಿಸಲು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿ ಬದಲಾಗಿ ನರ್ಸರಿಯಿಂದಲೇ ಇಂಗ್ಲೀಷ್ ಬೋಧನೆಗೆ ಅವಕಾಶ ನೀಡಲು ಯೋಗಿ ಸರ್ಕಾರ ಚಿಂತನೆ ನಡೆಸುತ್ತಿದೆ. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯ ಯೋಗಾ ಶಿಕ್ಷಣ ಕಾರ್ಯಕ್ರಮಗಳಿಗೆ ಆದೇಶಿಸಿರುವ ಯೋಗಿ ಸರ್ಕಾರ, ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ತರಬೇತಿ ನೀಡುವಂತೆ ಸೂಚಿಸಿದೆ. ಶಾಲಾ ಪಠ್ಯಕ್ರಮ ದೇಶಭಕ್ತಿ ಮತ್ತು ರಾಷ್ಟ್ರೀಯತೆ ಮತ್ತು ಸಂಸ್ಕೃತಿಯನ್ನು ಸಾರುವಂತಿರಬೇಕು ಎಂದು ಶಿಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Loading...