ಆ ಚಿತ್ರಕ್ಕೆ ಕಥೆ ಬರೆದಿದ್ದು ‘ಯೋಗಿ’ಯಂತೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೇವಲ ಸಾಧುಗಳಲ್ಲ, ಮುಖ್ಯಮಂತ್ರಿ ಮಾತ್ರವಲ್ಲ, ಅವರಲ್ಲಿ ಒಬ್ಬ ಉತ್ತಮ ಲೇಖಕನೂ ಇದ್ದಾನೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಅವದೇಶ್ ಸಿಂಗ್ ಹೇಳಿದ್ದಾರೆ.

ತಾವು ತೆಗೆದ ಬಾಬಾ ಮತ್ಸ್ಯೇಂದ್ರನಾಥ್ ಅವರ ಜೀವನಾಧಾರಿತ ಚಿತ್ರ “ಜಾಗ್ ಮಾಚಂದೆರ್ ಗೋರಖ್ ಆಯಾ” ಕ್ಕೆ ಕಥೆಯನ್ನು ನೀಡಿದ್ದು ಯೋಗಿ ಆದಿತ್ಯನಾಥ್ ಅವರೇ ಎಂದು ಅವದೇಶ್ ಸಿಂಗ್ ಬಹಿರಂಗಪಡಿಸಿದ್ದಾರೆ. ಆದರೆ ತಮ್ಮ ಹೆಸರು ಎಲ್ಲೂ ಹೇಳಿಕೊಳ್ಳಲು ಯೋಗಿಗೆ ಇಷ್ಟವಿಲ್ಲವಂತೆ.

ಕೇವಲ ಕಥೆಯಲ್ಲದೇ, ಆಧ್ಯಾತ್ಮಿಕ, ಶಿಸ್ತಿನ ಕುರಿತಂತೆ ಯಠಯೋಗ್ ಸ್ವರೂಪ್ ಏವಂ ಸಾಧನ, ರಾಜ್ ಯೋಗ್ ಸ್ವರೂಪ್ ಏವಂ ಸಾಧನ, ಯುಗ್ ಪುರುಷ್ ಮಹಂತ್ ದಗ್ವಿಜಯ್ ನಾಥ್, ಯೋಗಿ ಸತ್ಕಾರಾಂ, ಹಠಯೋಗ್ ಪ್ರಿವೀಠಿಕ, ಮಹಾಯೋಗಿ ಗೋರಖ್ ನಾಥ್ ಮುಂತಾದ ಪುಸ್ತಕಗಳನ್ನು ಯೋಗಿ ಆದಿತ್ಯನಾಥ್ ಬರೆದಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಭಾರತದ ಪ್ರತಿ ದಾಳಿಗೆ ಇಬ್ಬರು ಪಾಕ್ ಸೈನಿಕರ ಸಾವು, ಒಂದು ಬಂಕರ್ ಧ್ವಂಸ