ಅಖಿಲೇಶ್ ಭಾವಚಿತ್ರವಿರುವ ಪಡಿತರ ಚೀಟಿಗಳ ವಿತರಣೆಗೆ ಯೋಗಿ ಆದಿತ್ಯನಾಥ್ ಸರ್ಕಾರ ಬ್ರೇಕ್ |News Mirchi

ಅಖಿಲೇಶ್ ಭಾವಚಿತ್ರವಿರುವ ಪಡಿತರ ಚೀಟಿಗಳ ವಿತರಣೆಗೆ ಯೋಗಿ ಆದಿತ್ಯನಾಥ್ ಸರ್ಕಾರ ಬ್ರೇಕ್

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಈ ಹಿಂದೆ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್ ಸರ್ಕಾರ ಮುದ್ರಿಸಿ ಇಟ್ಟಿದ್ದ ಸುಮಾರು 60 ಲಕ್ಷ ಪಡಿತರ ಚೀಟಿಗಳನ್ನು ವಿತರಣೆ ಮಾಡದಿರಲು ನಿರ್ಧರಿಸಿದೆ. ಅಖಿಲೇಶ್ ಸರ್ಕಾರ ಮುದ್ರಿಸಿದ್ದ ಪಡಿತರ ಚೀಟಿಗಳು ಅಖಿಲೇಶ್ ಯಾದವ್ ಭಾವಚಿತ್ರಗಳನ್ನು ಹೊಂದಿರುವುದರಿಂದ, ಯೋಗಿ ಆದಿತ್ಯನಾಥ್ ಸರ್ಕಾರ ಈ ಎಲ್ಲಾ ಪಡಿತರ ಕಾರ್ಡ್ ಹಿಂಪಡೆಯಲು ನಿರ್ಧರಿಸಿದೆ.

ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಖಿಲೇಶ್ ಸರ್ಕಾರ ತರಾತುರಿಯಿಂದ ಸಮಾಜವಾದಿ ಪಕ್ಷದ ಬಣ್ಣಗಳಾದ ಕೆಂಪು ಮತ್ತು ಹಸಿರು ಬಣ್ಣಗಳನ್ನು ಹೊಂದಿದ್ದ ಸುಮಾರು 60 ಲಕ್ಷ ಪಡಿತರ ಕಾರ್ಡ್ ಗಳನ್ನು ವಿತರಿಸಲು ಮುದ್ರಿಸಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದ್ದ ಕಾರಣ ವಿತರಿಸಲು ಸಾಧ್ಯವಾಗಿರಲಿಲ್ಲ.

ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಘೋಷಿಸುವ ಮೊದಲು ಅಖಿಲೇಶ್ ಸರ್ಕಾರ ವಿತರಿಸಿದ್ದ ಇದೇ ರೀತಿಯ ಸುಮಾರು 3.4 ಕೋಟಿ ಪಡಿತರ ಚೀಟಿಗಳನ್ನೂ ರದ್ದುಗೊಳಿಸಲು ಹೊಸ ಸರ್ಕಾರ ನಿರ್ಧರಿಸಿದೆ. ಇದರ ಬದಲಾಗಿ ಯೋಗಿ ಆದಿತ್ಯನಾಥ್ ಸರ್ಕಾರ ಆಧಾರ್ ಲಿಂಕ್ ಮಾಡಿದ ಪಡಿತರ ಕಾರ್ಡ್ ತರಲು ಯೋಜಿಸಿದೆ. ಈ ಪಡಿತರ ಕಾರ್ಡ್ ಗಳು ಬಾರ್ ಕೋಡ್ ಗಳನ್ನು ಹೊಂದಿದ್ದು, ಸಿಲಿಕಾನ್ ಚಿಪ್ಸ್ ಹೊಂದಿರುವ ಸ್ಮಾರ್ಟ್ ಕಾರ್ಡ್ ನಂತಿರುತ್ತವೆ.

Loading...
loading...
error: Content is protected !!