ಯೋಗಿ ಮಹತ್ವದ ನಿರ್ಧಾರ: ಒಂದೂವರೆ ಕೋಟಿ ರೈತರ ಸಾಲ ಮನ್ನಾ – News Mirchi

ಯೋಗಿ ಮಹತ್ವದ ನಿರ್ಧಾರ: ಒಂದೂವರೆ ಕೋಟಿ ರೈತರ ಸಾಲ ಮನ್ನಾ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ರಾಜ್ಯದ ಒಂದು ಕೋಟಿಗೂ ಅಧಿಕ ರೈತರ ಸಾಲವನ್ನು ಮನ್ನಾ ಮಾಡಲು ಸಿದ್ಧತೆ ನಡೆಸಿದ್ದಾರೆ. ಮುಂದಿನ ವಾರ ಈ ಕುರಿತು ಅಂತಿಮ ತೀರ್ಮಾನ ಘೋಷಣೆಯಾಗುವ ಸಾಧ್ಯತೆ ಇದೆ.

ಇಂದು (ಸೋಮವಾರ) ನಡೆಯುವ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಲಿದ್ದಾರೆ. ರಾಜ್ಯದ ಒಂದು ಕೋಟಿಗೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಹೊಂದಿರುವ ಪಟ್ಟಿಯನ್ನು ಈಗಾಗಲೇ ಮುಖ್ಯಮಂತ್ರಿಗೆ ಕಳುಹಿಸಿರುವುದಾಗಿ ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ ಹೇಳಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಲ ಮನ್ನಾ ಭರವಸೆಯೂ ಒಂದು ಮುಖ್ಯ ಕಾರಣ, ಹೀಗಾಗಿ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಸಾಲ ಮನ್ನಾ ಪಟ್ಟಿಯನ್ನು ಸಿದ್ಧ ಪಡಿಸುವ ಕಾರ್ಯದಲ್ಲಿ ತೊಡಗಿದ್ದಾಗಿ ಅವರು ಹೇಳಿದ್ದಾರೆ.

Loading...