ಪ್ರಧಾನಿಯಾಗುವ ಹಂಬಲ ಇಲ್ಲ, ಜವಾಬ್ದಾರಿ ಮುಗಿದ ನಂತರ ಮಠಕ್ಕೆ |News Mirchi

ಪ್ರಧಾನಿಯಾಗುವ ಹಂಬಲ ಇಲ್ಲ, ಜವಾಬ್ದಾರಿ ಮುಗಿದ ನಂತರ ಮಠಕ್ಕೆ

ಕೆಲ ಬಿಜೆಪಿ ಕಾರ್ಯಕರ್ತರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂದಿನ ಪ್ರಧಾನಿ, ಮೋದಿಯವರ ನಂತರ ಆ ಹುದ್ದೆಯನ್ನು ಯೋಗಿ ಅಲಂಕರಿಸುತ್ತಾರೆ ಎನ್ನುತ್ತಿರುತ್ತಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸಾಧಿಸಿದ ಭರ್ಜರಿ ಗೆಲುವಿನ ನಂತರ ಯೋಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಂದಿನಿಂದ ತಮ್ಮದೇ ಶೈಲಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ.

ಮುಂದಿನ ಪ್ರಧಾನಿ ಎಂದು ತಮ್ಮ ಹೆಸರು ಹರಿದಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಯೋಗಿ, ಅಂತಹ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ತಾವು ದೀರ್ಘ ಕಾಲ ರಾಜಕೀಯದಲ್ಲಿ ಇರುವುದಿಲ್ಲ ಎನ್ನುವ ಮೂಲಕ ಪ್ರಧಾನಿಯಾಗುವ ಹಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಆದಿತ್ಯನಾಥ್.

ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶ್ವಾಸವಿರಿಸಿ ಮುಖ್ಯಮಂತ್ರಿ ಜವಾಬ್ದಾರಿ ನೀಡಿದ್ದಾರೆ, ಇದು ನನಗೆ ಒಲಿದು ಬಂದ ಅದೃಷ್ಟವೆಂದೇ ಭಾವಿಸಿದ್ದೇನೆ. ನಾನು ಪೂರ್ಣಾವಧಿ ರಾಜಕಾರಣಿ ಅಲ್ಲ, ಜನರ ಸೇವೆ ಮಾಡಲೆಂದೇ ರಾಜಕಾರಣಕ್ಕೆ ಇಳಿದಿದ್ದೇನೆ. ಈ ಜವಾಬ್ದಾರಿ ಮುಗಿದ ನಂತರ ಇದೆಲ್ಲ ಮಠಕ್ಕೆ ಹಿಂದಿರುಗುತ್ತೇನೆ ಎಂದು ಸ್ಪಷ್ಟಪಡಿಸಿದರು.

Loading...
loading...
error: Content is protected !!