facts-about-india

ನೀವು ತಿಳಿಯಲೇ ಬೇಕಾದ ಭಾರತದ 20 ಸಂಗತಿಗಳು

ಭಾರತವನ್ನು ಮಾನವ ಜನಾಂಗದ ತೊಟ್ಟಿಲು, ಮಾನವ ಭಾಷೆಯ ಜನ್ಮ ಸ್ಥಳ, ಇತಿಹಾಸದ ತಾಯಿ, ದಂತಕಥೆಗಳ ಅಜ್ಜಿ, ಸಂಪ್ರದಾಯಗಳ ಮುತ್ತಜ್ಜಿ ಎಂದು ಬಣ್ಣಿಸಲಾಗುತ್ತದೆ. ಇತಿಹಾಸದಲ್ಲಿನ ಅತ್ಯಮೂಲ್ಯ ಮತ್ತು ಬೋಧಿಸಲು ಯೋಗ್ಯವಾದಂತ ವಸ್ತುಗಳನ್ನು ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ.

ಇವು ನಾವು ಹೇಳಿದ ಮಾತುಗಳಲ್ಲ, ಅಮೆರಿಕದ ಖ್ಯಾತ ಬರಹಗಾರ ಮಾರ್ಕ್ ಟ್ವೇನ್ ಭಾರತದ ಕುರಿತು ಬಣ್ಣಿಸಿರುವ ಮಾತುಗಳು. ಮಾರ್ಕ್ ಟ್ವೇನ್ ಮಾತುಗಳಿಗೆ ಪುಷ್ಠಿ ನೀಡುವಂತಹ ಮತ್ತಷ್ಟು ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳೋಣ.

1. ತೇಲುವ ಅಂಚೆ ಕಛೇರಿ

ಭಾರತವು ಅತಿ ದೊಡ್ಡ ಅಂಚೆ ಜಾಲವನ್ನು ಹೊಂದಿರುವ ದೇಶವಾಗಿದೆ. ಭಾರತದಲ್ಲಿ 1.55.015 ಅಂಚೆ ಕಛೇರಿಗಳಿವೆ. ಒಂದು ಅಂಚೆ ಕಛೇರಿಯು 7,175 ಜನರಿಗೆ ಸೇವೆಯನ್ನು ನೀಡುತ್ತದೆ. ಶ್ರೀನಗರದ ದಾಲ್ ಸರೋವರದ ಮೇಲೆ ತೇಲುವ ಅಂಚೆ ಕಛೇರಿಯನ್ನು 2011 ರಲ್ಲಿ ಆರಂಭಿಸಲಾಯಿತು.Floating Post Office

2. ಬಾಹ್ಯಾಕಾಶದಿಂದ ನೋಡಲು ಸಾಧ್ಯವಾಗುವಂತಹ ಕುಂಭ ಮೇಳದ ಅತಿ ದೊಡ್ಡ ಜನಸಮೂಹದ 

Kumbh Mela

2011 ರಲ್ಲಿ ನಡೆದ ಕುಂಭ ಮೇಳವು ಸುಮಾರು 7.5 ಕೋಟಿ ಯಾತ್ರಿಗಳೊಂದಿಗೆ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಮೂಹ ಸೇರಿದ ಹಿರಿಮೆಗೆ ಪಾತ್ರವಾಗಿದೆ. ಇದನ್ನು ಬಾಹ್ಯಾಕಾಶ್ಯದಿಂದಲೂ ಗುರುತಿಸಲು ಸಾಧ್ಯವಾದಂತಹ ದೊಡ್ಡ ಜನಸಮೂಹವಾಗಿದೆ.

3. ಅತಿ ಹೆಚ್ಚು ತೇವದ ಪ್ರದೇಶ

Mawsynram

ಮೇಘಾಲಯದಲ್ಲಿನ ಖಾಸಿ ಬೆಟ್ಟದ ಮೇಲಿನ ಮೋಸಿನ್ ರಾಮ್ ಗ್ರಾಮದಲ್ಲಿ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸರಾಸರಿ ಮಳೆಯಾಗುತ್ತದೆ. 1861 ರಲ್ಲಿ ಅತಿ ಹೆಚ್ಚು ಮಳೆಯ ದಾಖಲೆಯನ್ನು ಹೊಂದಿದ ಚಿರಾಪುಂಜಿಯೂ ಮೇಘಾಲಯದಲ್ಲಿದೆ.

4. ಅತಿ ಎತ್ತರದ ಕ್ರಿಕೆಟ್ ಮೈದಾನ

chail cricket ground

ವಿಶ್ವದಲ್ಲಿಯೇ ಅತಿ ಎತ್ತರದ ಪ್ರದೇಶದಲ್ಲಿರುವ ಕ್ರಿಕೆಟ್ ಮೈದಾನ ಹಿಮಾಚಲ ಪ್ರದೇಶದ ಚೈಲ್ ನಲ್ಲಿದೆ. ‘ಚೈಲ್ ಕ್ರಿಕೆಟ್ ಮೈದಾನ’ ಸಮುದ್ರ ಮಟ್ಟದಿಂದ 2,444 ಮೀಟರ್ ಗಳಷ್ಟು ಎತ್ತರದಲ್ಲಿದೆ. ಈ ಮೈದಾನವನ್ನು 1893 ರಲ್ಲಿ ನಿರ್ಮಾಣ ಮಾಡಲಾಗಿದೆ.

5. ಶಾಂಪೂ ಮಾಡುವುದು ಭಾರತದ ಪರಿಕಲ್ಪನೆ

Shampoo

ಶಾಂಪೂವನ್ನು ಕಂಡು ಹಿಡಿದದ್ದು ಭಾರತದಲ್ಲಿ. ಆದರೆ ರಾಸಾಯನಿಕಗಳನ್ನು ಬಳಸದೆ, ಗಿಡಮೂಲಿಕೆಗಳಿಂದ ಶಾಂಪೂವನ್ನು ತಯಾರಿಸಲಾಗುತ್ತಿತ್ತು. ‘ಶಾಂಪೂ’ ಎಂಬ ಪದವೇ ಸಂಸ್ಕೃತದ ಚಂಪೂ ಎಂಬ ಪದದಿಂದ ಬಂದಿದೆ. ಇದು ಮಸಾಜ್ ಎಂಬ ಅರ್ಥವನ್ನು ನೀಡುತ್ತದೆ.

6. ಭಾರತದ ರಾಷ್ಟ್ರೀಯ ಕಬಡ್ಡಿ ತಂಡ ಇದುವರೆಗೂ ಆಡಿರುವ ಎಲ್ಲಾ ಕಬಡ್ಡಿ ವಿಶ್ವಕಪ್ ಗಳನ್ನು ಗೆದ್ದಿದೆ.

India kabaddi

7. ಭಾರತದ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರ ಗೌರವಾರ್ಥ ಸ್ವಿಜರ್ಲೆಂಡಿನಲ್ಲಿ ಮೇ 26 ರ ಸೈನ್ಸ್ ಡೇ ಆಚರಿಸಲಾಗುತ್ತದೆ

Dr. Abdul Kalam

ಭಾರತದ ಕ್ಷಿಪಣಿ ಕಾರ್ಯಕ್ರಮಗಳ ಪಿತಾಮಹ ಎಂದು ಖ್ಯಾತಿಯಾಗಿರುವ ಡಾ.ಅಬ್ದುಲ್ ಕಲಾಂ ಅವರು 2006 ರಲ್ಲಿ ಸ್ವಿಜರ್ಲೆಂಡ್ ಗೆ ಭೇಟಿ ನೀಡಿದ್ದಾಗ ಅವರ ಗೌರವಾರ್ಥವಾಗಿ ಸ್ವಿಜರ್ಲೆಂಡ್ ಸರ್ಕಾರ ಮೇ 26 ಅನ್ನು ಸೈನ್ಸ್ ಡೇ ಎಂದು ಘೋಷಿಸಿತು.

8. ಭಾರತದ ಮೊದಲ ರಾಷ್ಟ್ರಪತಿ ಪಡೆದಿದ್ದು ಅವರ ವೇತನದ ಶೇ.50 ರಷ್ಟು ಮಾತ್ರ

Rajendra Prasad

ಡಾ. ರಾಜೇಂದ್ರ ಪ್ರಸಾದ್ ಅವರು ಭಾರತದ ರಾಷ್ಟ್ರಪತಿಗಳಾಗಿದ್ದಾಗ, ಅವರು ತಮ್ಮ ವೇತನದ ಶೇ.50 ರಷ್ಟನ್ನು ಮಾತ್ರ ಸ್ವೀಕರಿಸಿದರು. ಅದಕ್ಕಿಂತ ಹೆಚ್ಚಿನ ಹಣದ ಅಗತ್ಯ ತಮಗಿಲ್ಲವೆಂದು ಅವರುಹೇಳಿದ್ದರು. ಅವರ 12 ವರ್ಷಗಳ ಅಧಿಕಾರಾವಾಧಿ ಮುಗಿಯುವುದರೊಳಗೆ ಅವರು ತಮ್ಮ ಒಟ್ಟು ವೇತನದ ಶೇ.25 ರಷ್ಟನ್ನು ಮಾತ್ರ ಪಡೆದರು. ಅಂದು ರಾಷ್ಟ್ರಪತಿಗಳಿಗೆ ಇದ್ದ ವೇತನ ರೂ.10,000.

9. ಭಾರತದ ಮೊದಲ ರಾಕೆಟ್ ಅನ್ನು ಸೈಕಲ್ ಮೂಲಕ ಸಾಗಿಸಲಾಯಿತು

ಭಾರತದ ಮೊದಲ ರಾಕೆಟ್ ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದು, ಅದನ್ನು ಕೇರಳದ ತಿರುವನಂತಪುರಂ ನಲ್ಲಿನ ಉಡಾವಣಾ ಕೇಂದ್ರಕ್ಕೆ ಸೈಕಲ್ ಮೂಲಕ ಸಾಗಿಸಲಾಯಿತು.

10. ಭಾರತವು ಎರಡನೇ ಅತಿ ಹೆಚ್ಚು ಇಂಗ್ಲೀಷ್ ಮಾತಾಡಬಲ್ಲ ದೇಶ

English

ಅಮೆರಿಕದ ನಂತರ ಅತಿ ಹೆಚ್ಚು ಇಂಗ್ಲೀಷ್ ಮಾತನಾಡಬಲ್ಲವರು ಇರುವ ದೇಶ ಭಾರತ. ಭಾರತದ ಜನಸಂಖ್ಯೆಯಲ್ಲಿ ಶೇ.10 ರಷ್ಟು ಜನರು ಇಂಗ್ಲೀಷ್ ಬಳಕೆ ಮಾಡಿದರೂ 12.5 ಕೋಟಿ ಜನ ಇಂಗ್ಲೀಷ್ ಬಳಕೆ ಮಾಡುವವರಿಂದಾಗಿ (5 ವರ್ಷಗಳ ಹಿಂದಿನ ಲೆಕ್ಕ) ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ.

11. ಅತಿ ಹೆಚ್ಚು ಸಸ್ಯಾಹಾರಿಗಳಿರುವ ದೇಶ ಭಾರತ

Vegetarian

ಧಾರ್ಮಿಕ ಕಾರಣಗಳಿರಬಹುದು, ಅಥವಾ ವೈಯುಕ್ತಿಕ ಆಯ್ಕೆಗಳಿರಬಹುದು. ಒಟ್ಟಿನಲ್ಲಿ ಭಾರತದ ಜನ ಸಂಖ್ಯೆಯಲ್ಲಿ ಶೇ.30-40 ರಷ್ಟು ಜನ ಸಸ್ಯಾಹಾರಿಗಳು. ಇದು ವಿಶ್ವದಲ್ಲಿಯೇ ಅತಿ ಹೆಚ್ಚು ಸಸ್ಯಾಹಾರಿ ಸ್ನೇಹಿ ದೇಶವೆಂಬ ಹಿರಿಮೆಗೆ ಪಾತ್ರವಾಗಿದೆ.

12. ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ದೇಶ ಭಾರತ

2014 ರ ಅಂಕಿ ಅಂಶಗಳ ಪ್ರಕಾರ 132.4 ಮಿಲಿಯನ್ ಟನ್ ಹಾಲು ಉತ್ಪಾದನೆಯೊಂದಿಗೆ ಭಾರತವು ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದೆ.

13. ಸಕ್ಕರೆ ಬಳಸಿದ ಮೊದಲ ದೇಶ

ಸಕ್ಕರೆಯನ್ನು ಶುದ್ಧೀಕರಿಸಿ ಹೊರತೆಗೆಯುವ ತಂತ್ರಗಳನ್ನು ಹೊಂದಿದೆ ಮೊದಲ ರಾಷ್ಟ್ರ ಭಾರತ. ವಿದೇಶಗಳಿಂದ ಹಲವಾರು ಪ್ರವಾಸಿಗರು ಇಲ್ಲಿ ಸಕ್ಕರೆ ಸಂಸ್ಕರಣೆಯನ್ನು ಕಲಿತು ಹೋದರು.

14. ಮಾನವ ಕ್ಯಾಲ್ಕುಲೇಟರ್ ಶಕುಂತಲಾ ದೇವಿ

Shakuntala devi

ಮಾನವ ಕ್ಯಾಲ್ಕುಲೇಟರ್: ಎರಡು 13 ಅಂಕಿಳಾದ 7,686,369,774,870 X 2,465,099,745,779 ಲೆಕ್ಕವನ್ನು ಕೇವಲ 28 ಸೆಕೆಂಡುಗಳಲ್ಲಿ ಬಿಡಿಸಿದ ನಂತರ ಆಕೆಗೆ ಮಾನವ ಕ್ಯಾಲ್ಕುಲೇಟರ್ ಎಂಬ ಬಿರುದು ನೀಡಲಾಯಿತು.

15. ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನೂ ರಚಿಸಿದವರು ರವೀಂದ್ರನಾಥ್ ಠಾಗೋರ್

ಭಾರತದ ರಾಷ್ಟ್ರಗೀತೆಯನ್ನು ರಚಿಸಿದ ರವೀಂದ್ರ ನಾಥ್ ಠಾಗೋರ್ ಅವರು ಬಾಂಗ್ಲಾದೇಶದ ರಾಷ್ಟ್ರಗೀತೆ ‘ಅಮರ್ ಸೊನಾರ್ ಬಾಂಗ್ಲಾ’ ವನ್ನು ರಚಿಸಿದ್ದಾರೆ. ಬ್ರಿಟೀಷರು ಅವರಿಗೆ ನೈಟ್ ಹುಡ್ ಬಿರುದನ್ನೂ ನೀಡಲು ಮುಂದಾಯಿತು. ಆದರೆ ಅದನ್ನು ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ನಂತರ ಅದನ್ನು ತಿರಸ್ಕರಿಸಿದರು.

16. ಧ್ಯಾನ್ ಚಂದ್ ಅವರಿಗೆ ಜರ್ಮನಿಯ ಪೌರತ್ವದ ನೀಡಲು ಮುಂದಾಗಿದ್ದರು

Dhyanchand

1936 ರಲ್ಲಿ ಬರ್ಲಿನ್ ಒಲಂಪಿಕ್ಸ್ ನಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಜರ್ಮನಿಯನ್ನು 8-1 ಅಂತರದಿಂದ ಸೋಲಿಸಿದ ಬಳಿಕ, ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನಿಂದ ಕರೆ ಬಂದಿತ್ತು. ಧ್ಯಾನ್ ಚಂದ್ ಅವರಿಗೆ ಜರ್ಮನಿಯ ಪೌರತ್ವ ನೀಡಿ, ಜರ್ಮನ್ ಮಿಲಿಟರಿಯಲ್ಲಿ ಉನ್ನತ ಸ್ಥಾನ ನೀಡುವ ಭರವಸೆ ನೀಡಿಲಾಯಿತು. ಆದರೆ ಈ ಪ್ರಸ್ಥಾಪವನ್ನು ಧ್ಯಾನ್ ಚಂದ್ ನಯವಾಗಿಯೇ ನಿರಾಕರಿಸಿದರು.

17. ಹ್ಯಾವೆಲ್ಸ್ ಸಂಪೂರ್ಣ ಭಾರತದ ಸಂಸ್ಥೆ, ಮೊದಲ ಮಾಲೀಕರ ಹೆಸರು ಕಂಪನಿಗೆ

ಹ್ಯಾವೆಲ್ಸ್ ಕಂಪನಿಯು ಸಂಪೂರ್ಣ ಭಾರತೀಯ ಬ್ರಾಂಡ್. ಇದರ ಮೊದಲ ಮಾಲೀಕನ ಹೆಸರನ್ನೇ ಕಂಪನಿಗೆ ಇಡಲಾಗಿದೆ. ತುಂಬಾ ವರ್ಷಗಳ ಹಿಂದೆ ಇದನ್ನು 10 ಲಕ್ಷ ರೂಪಾಯಿಗಳಿಗೆ ಖರೀದಿಸಲಾಯಿತಾದರೂ, ಈಗ ಇದು ಶತಕೋಟಿ ಬೆಲೆ ಬಾಳುವ ವಿದ್ಯುತ್ ಉಪಕರಣಗಳ ಸಂಸ್ಥೆಯಾಗಿ ಬೆಳೆದಿದೆ. ಇದು ಭಾರತದ ಕಂಪನಿಯಾಗಿದ್ದು, ಇದರ ಅಸಲಿ ಮಾಲೀಕ ಹವೇಲಿ ರಾಮ್ ಗುಪ್ತಾ.

18. ವಜ್ರಗಳ ಮೊದಲ ಗಣಿಗಾರಿಕೆ

Daimonds

ವಜ್ರಗಳ ಮೊದಲ ಗಣಿಗಾರಿಕೆ ಆರಂಭವಾಗಿದ್ದು ಭಾರತದಲ್ಲಿ: ಮೊದಲು ಭಾರತದ ಗುಂಟೂರು ಮತ್ತು ಕೃಷ್ಣಾ ಜಿಲ್ಲೆಗಳ ಕೃಷ್ಣಾ ನದಿಯ ಮೆಕ್ಕಲು ನಿಕ್ಷೇಪಗಳಲ್ಲಿ ಮಾತ್ರ ವಜ್ರಗಳು ಕಂಡು ಬರುತ್ತಿದ್ದವು. 18 ನೇ ಶತಮಾನದಲ್ಲಿ ಬ್ರೆಜಿಲ್ ನಲ್ಲಿ ವಜ್ರ ನಿಕ್ಷೇಪಗಳು ಪತ್ತೆಯಾಗುವವರೆಗೂ ಭಾರತವೇ ವಜ್ರಗಳ ಉತ್ಪಾದನೆಯನ್ನು ಮಾಡುತ್ತಿತ್ತು.

19. ಏಕೈಕ ಮತದಾರನಿಗೆ ವಿಶೇಷ ಮತಗಟ್ಟೆ

bharat das

2004 ರಿಂದಲೂ ಮಹಂತ್ ಭರತ್ ದಾಸ್ ಪ್ರತಿ ಚುನಾವಣೆಯಲ್ಲಿಯೂ ಮತದಾನ ಮಾಡುತ್ತಾ ಬರುತ್ತಿದ್ದಾರೆ. ಗಿರ್ ಅರಣ್ಯದಲ್ಲಿರುವ ಇರುವ ಈತನೊಬ್ಬನಿಗಾಗಿಯೇ ಪ್ರತಿ ಚುನಾವನೆಯಲ್ಲಿಯೂ ವಿಶೇಷ ಮತಗಟ್ಟೆಯನ್ನು ತೆರೆಯಲಾಗುತ್ತದೆ.

20. ಸ್ನೇಕ್ಸ್ ಅಂಡ್ ಲ್ಯಾಡರ್ಸ್ ಮೂಲ ಭಾರತದ್ದು

snakes and laddersಆರಂಭದಲ್ಲಿ ಮೋಕ್ಷ ಪಟಂ ಎಂದು ಕರೆಯಲಾಗುತ್ತಿದ್ದ ಈ ಹಾವು ಮತ್ತು ಏಣಿ ಆಟವನ್ನು ಮಕ್ಕಳಿಗೆ ಕರ್ಮದ ಕುರಿತು ನೈತಿಕ ಪಾಠ ಕಲಿಸಲೆಂದೇ ಕಂಡುಹಿಡಿಯಲಾಯಿತು. ನಂತರದ ದಿನಗಳಲ್ಲಿ ಇದು ವಾಣಿಜ್ಯೀಕರಣಗೊಂಡು ವಿಶ್ವದ ಅತ್ಯಂತ ಜನಪ್ರಿಯ ಬೋರ್ಡ್ ಗೇಮ್ ಗಳಲ್ಲಿ ಒಂದಾಗಿದೆ.

Get Latest updates on WhatsApp. Send ‘Subscribe’ to 8550851559