ಆಧಾರ್ ಲಿಂಕ್ ಆಗದ ಪಾನ್ ಕಾರ್ಡ್ ಅಮಾನ್ಯ, ನೀವು ಹೀಗೆ ಮಾಡಿ…

ಪಾನ್ ಕಾರ್ಡ್ ನೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದರೆ ಡಿಸೆಂಬರ್ 31 ರ ನಂತರ ಅಂತಹ ಪಾನ್ ಕಾರ್ಡ್ ಅಮಾನ್ಯಗೊಳ್ಳಲಿದೆ. ಈ ವಿಷಯವನ್ನು ಕೇಂದ್ರ ಸರ್ಕಾರದ ಮೂಲಕಗಳು ದೃಢಪಡಿಸಿವೆ. ಪ್ರತಿ ವ್ಯಕ್ತಿಗೆ ಇರುವ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಮತ್ತಷ್ಟು ಸೇವೆಗಳಲ್ಲಿ ಬಳಸಿಕೊಳ್ಳಲು ನೋಡುತ್ತಿರುವ ಕೇಂದ್ರ ಸರ್ಕಾರ, ಇದೀಗ ಪಾನ್ ಕಾರ್ಡ್‌ಗೂ ಆಧಾರ್ ಸಂಖ್ಯೆಯನ್ನು ಸಂಪರ್ಕಿಸುವುದು ಕಡ್ಡಾಯ ಮಾಡುತ್ತಿದೆ.

ಕೆಲವರು ಅಕ್ರಮವಾಗಿ ಪಾನ್ ಕಾರ್ಡ್ ಪಡೆಯುವ ಮೂಲಕ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಮುಂದಾಗಿದೆ. ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಮಾಡಿ ಬುಧವಾರ ಲೋಕಸಭೆಯಲ್ಲಿ ಮಸೂದೆಯೊಂದನ್ನು ಅಂಗೀಕರಿಸಿದೆ. ಇದರ ಪ್ರಕಾರ ಆಧಾರ್ ಸಂಖ್ಯೆ ಅಥವಾ ಆಧಾರ್ ಗಾಗಿ ಅರ್ಜಿ ಸಲ್ಲಿಸಿದ ರಸೀದಿ ಇಲ್ಲದಿದ್ದರೆ ಜುಲೈ 1 ರಿಂದ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಕಾಶವಿರುವುದಿಲ್ಲ.

ಪಾನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಮಾಡಲು www.incometaxindiaefiling.gov.in ವೆಬ್ಸೈಟ್ ಗೆ ಭೇಟಿ ನೀಡಿ.

ನಿಮ್ಮ ಲಾಗಿನ್ ಐಡಿ, ಹುಟ್ಟಿದ ದಿನಾಂಕ ಬಳಸಿ ಲಾಗಿನ್ ಮಾಡಿ. ಲಾಗಿನ್ ಮಾಡುವ ವೇಳೆ ಪರದೆ ಮೇಲೆ ಕಾಣುವ ಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಲಾಗಿನ್ ಆಗುತ್ತಿದ್ದಂತೆ ಅಧಾರ್ ಲಿಂಕ್ ಮಾಡಲು ನೆನಪಿಸುತ್ತದೆ. ಇಲ್ಲವಾದರೆ ಪ್ರೊಫೈಲ್ ಸೆಟ್ಟಿಂಗ್ ಗೆ ಹೋಗಿ ಲಿಂಕ್ ಆಧಾರ್ ಕ್ಲಿಕ್ ಮಾಡಿ.

Loading...

Leave a Reply

Your email address will not be published.

error: Content is protected !!