ಪ್ರಧಾನಿ ಭದ್ರತಾ ಸಿದ್ಧತೆ ಪರಿಶೀಲಿಸಿದ ನಕಲಿ ಐಪಿಎಸ್ ಅಧಿಕಾರಿ ಬಂಧನ

ಪಾಟ್ನಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಪಾಟ್ನಾ ಭೇಟಿ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದ ನಕಲಿ ಐಪಿಎಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಾಯಾಂಕ್ ಮೃಣಾಲ್ ತ್ರಿವೇದಿ ಎಂಬಾತ ಐಪಿಎಸ್ ಅಧಿಕಾರಿಯಂತೆ ಹೇಳಿಕೊಂಡು ಭದ್ರತಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಗೆ ಸೂಚನೆಗಳನ್ನು ನೀಡುತ್ತಿದ್ದ. 2015 ರ ಬ್ಯಾಚ್ ನ ಐಪಿಎಸ್ ಅಧಿಕಾರಿ ತಾನಾಗಿದ್ದು, ಪ್ರಧಾನಿಗಳ ಭದ್ರತೆಗೆ ನಿಯೋಜನೆಗೊಂಡಿದ್ದೇನೆ ಎಂದು ಎಲ್ಲರನ್ನೂ ನಂಬಿಸಿದ್ದ.

ಬಂಧಿತ ವ್ಯಕ್ತಿ ಆರ್.ಬಿ.ಐ ಅಧಿಕಾರಿಯ ಮಗನಾಗಿದ್ದು, ಆತನನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Loading...

Leave a Reply

Your email address will not be published.

error: Content is protected !!