ಪೊಲೀಸ್ ನೇಮಕಾತಿ: ಎತ್ತರ ಕಾಣಿಸಲು ವಿಗ್ ಧರಿಸಿ ಬಂದ ಯುವಕ – News Mirchi

ಪೊಲೀಸ್ ನೇಮಕಾತಿ: ಎತ್ತರ ಕಾಣಿಸಲು ವಿಗ್ ಧರಿಸಿ ಬಂದ ಯುವಕ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಪೊಲೀಸ್ ನೇಮಕಾತಿಗೆ ತ್ರಯಂಬಕೇಶ್ವರ್ ನಿಂದ ರಾಹುಲ್ ಪಾಟೀಲ್ ಎಂಬ ಯುವಕ ಬಂದಿದ್ದ. ಪರೀಕ್ಷೆಯಲ್ಲಿ ಎತ್ತರ ಕಡಿಮೆಯಾಗುತ್ತದೆಯೇನೋ ಎಂದು ಭಾವಿಸಿ ಆತ ಮಾಡಿದ್ದೇನು ಗೊತ್ತೇ? ಹೇಗಿದ್ದರೂ ಎತ್ತರವನ್ನು ತಲೆಯ ಮೇಲೇ ನೋಡುತ್ತಾರಾದ್ದರಿಂದ ಒಂದು ವಿಗ್ ಹಾಕಿಕೊಂಡರೆ ಹೇಗೆ ಎಂದು ಯೋಚಿಸಿ, ವಿಗ್ ಧರಿಸಿ ಬಂದೇ ಬಿಟ್ಟ.

ಮೊದಲು 165 ಸೆಂ.ಮೀ ಎತ್ತರದಿಂದ ಆತ ಆಯ್ಕೆಯಾದ. ಆದರೆ ಅದೃಷ್ಟ ಸರಿಯಿರಲಿಲ್ಲ ಅನ್ಸುತ್ತೆ, ನಂತರ ಪೇದೆಯೊಬ್ಬರಿಗೆ ಅನುಮಾನ ಬಂದು ಅಸಲಿ ವಿಷಯ ಬೆಳಕಿಗೆ ಬಂದಿದೆ. ಸದ್ಯ ಆತನನ್ನು ಅಮಾನತು ಮಾಡಿದ್ದು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಡಿಸಿಪಿ ಶ್ರೀಕಾಂತ್ ಧೀವಾರೆ ಹೇಳಿದ್ದಾರೆ. 5,756 ಪೊಲೀಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಸುಮಾರು 8.73 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ.

Loading...

Leave a Reply

Your email address will not be published.