ಬ್ಯಾಂಕಿನಲ್ಲಿ 10, 20 ನೋಟು ದರೋಡೆ ಮಾಡಿ ಕಾರು ಖರೀದಿಸಿ… – News Mirchi
We are updating the website...

ಬ್ಯಾಂಕಿನಲ್ಲಿ 10, 20 ನೋಟು ದರೋಡೆ ಮಾಡಿ ಕಾರು ಖರೀದಿಸಿ…

ಗರಿಷ್ಠ ಮುಖಬೆಲೆಯ ನೋಟು ರದ್ದಾದ ನಂತರ ದೇಶಾದ್ಯಂತ ನೋಟು ಕೊರತೆ ಎದುರಾಗಿದೆ. ಆದರೆ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಹುಸ್ಸೇನ್ ಗ್ರಾಮದಲ್ಲಿ ದುಷ್ಚಟಗಳಿಗೆ ದಾಸರಾದ ಯುವಕರ ಗುಂಪೊಂದು ಬರೀ ರೂ. 10 ಮುಖಬೆಲೆಯ ನೋಟು ನೀಡಿ ಕಾರು ಖರೀದಿಸಿ ಪೊಲೀಸರ ಅತಿಥಿಗಳಾಗಿದ್ದಾರೆ.

ನೋಟು ಕೊರತೆಯ ನಡುವೆ ಬಿಂದಾಸ್ ಆಗಿ ಖರ್ಚು ಮಾಡುತ್ತಾ ಸಂಚರಿಸುತ್ತಿದ್ದ ಈ ಗುಂಪನ್ನು ಅನುಮಾನದ ಮೇಲೆ ಪೊಲೀಸರು ಬಂಧಿಸಿದರು. ನಂತರ ತಿಳಿದು ಬಂತು ಅಸಲಿ ಸತ್ಯ.

ಈ ಯುವಕರು ಅಕ್ಟೋಬರ್ 19 ರಂದು ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಹತ್ತು ಮತ್ತು ಇಪ್ಪತ್ತು ರೂಪಾಯಿ ಮುಖಬೆಲೆಯ ನೋಟುಗಳ ದರೋಡೆ ಮಾಡಿದ್ದಾಗಿ ತನಿಖೆಯ ವೇಳೆ ಬಹಿರಂಗವಾಗಿದೆ. ದರೋಡೆ ಮಾಡಿದ್ದ ಹಣದಲ್ಲಿ ಉಳಿದಿದ್ದ 50 ಸಾವಿರ ನಗದು ಮತ್ತು ಖರೀದಿಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!