ಯುವಶಕ್ತಿ ಚಿಂತಾಮಣಿ ತಾಲ್ಲೂಕಿನ ಪದಾಧಿಕಾರಿಗಳ ನೇಮಕ

ಬಯಲುಸೀಮೆಯ ಶಾಶ್ವತ ನೀರಾವರಿ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿರುವ, ಯುವಜನತೆಯನ್ನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇರಿಪಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಯುವಶಕ್ತಿ ಸಂಘಟನೆಯಿಂದ ಚಿಂತಾಮಣಿ ತಾಲ್ಲೂಕಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ನೀರಾವರಿ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಸಂಘಟನೆಯನ್ನು ವಿಸ್ತರಿಸುವ ಸಲುವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗುವುದು ಎಂದು ಯುವಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ಶಿವಪ್ರಕಾಶ ರೆಡ್ಡಿ ಹೇಳಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ನೂತನ ಪದಾಧಿಕಾರಿಗಳ ಪಟ್ಟಿ

  • ತಾಲ್ಲೂಕು ಅಧ್ಯಕ್ಷರು: ವೈ.ಜೆ ಮಂಜುನಾಥ್, ಯರ‌್ರಯ್ಯಗಾರಹಳ್ಳಿ
  • ತಾಲ್ಲೂಕು ಉಪಾಧ್ಯಕ್ಷರು: ಎಸ್.ನವೀನ್, ಹೆಬ್ಬರಿ
  • ತಾಲ್ಲೂಕು ಪ್ರಧಾನ ಕಾರ್ಯದರ್ಶಿ: ಆರ್. ನವೀನ್, ವೆಂಕಟಗಿರಿಕೋಟೆ
  • ತಾಲ್ಲೂಕು ಜಂಟಿ ಕಾರ್ಯದರ್ಶಿ: ಎನ್.ಅಮರೇಶ್, ಪೆರಮಾಚನಹಳ್ಳಿ
  • ತಾಲ್ಲೂಕು ಸಂಘಟನಾ ಕಾರ್ಯದರ್ಶಿ: ಜಿ.ಸುಧಾಕರ್, ಬುಕ್ಕನಹಳ್ಳಿ
  • ತಾಲ್ಲೂಕಿನ ಜಂಟಿ ಸಂಘಟನಾ ಕಾರ್ಯದರ್ಶಿ: ಕೆ.ನವೀನ್, ಗಡಿಗವಾರಹಳ್ಳಿ
  • ತಾಲ್ಲೂಕಿನ ಜಂಟಿ ಕಾರ್ಯದರ್ಶಿ: ಬಿ. ಮಂಜುನಾಥ, ಚಿಲಕಲನೇರ್ಪು.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache