ಜಾಕೀರ್ ನಾಯಕ್ ಗೆ ಮತ್ತೊಂದು ಹೊಡೆತ

ನವದೆಹಲಿ: ಇಸ್ಲಾಂ ಧರ್ಮದ ವಿವಾದಿತ ಪ್ರಚಾರಕ ಜಾಕೀರ್ ನಾಯಕ್ ಗೆ ಮತ್ತೊಂದು ಹೊಡೆತ ಬಿದ್ದಿದೆ. ಈಗಾಗಲೇ ನಿಷೇದಕ್ಕೊಳಗಾಗಿರುವ ಜಾಕೀರ್ ನಾಯಕ್ ನ ಎನ್.ಜಿ.ಒ ಇಸ್ಲಾಮಿಕ್ ಫೌಂಡೇಷನ್ ಮತ್ತಿತರಿಗೆ ಸೇರಿದ ರೂ.18.37 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಟ್ಯಾಚ್ ಮಾಡಿದ್ದಾರೆ. ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಅಕ್ಟ್ 2012 ರ ಅಡಿಯಲ್ಲಿ ಈ ಆಸ್ತಿಗಳನ್ನು ಅಟ್ಯಾಚ್ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.

ಇದುವರೆಗೂ ನೀಡಿದ್ದ ಎಲ್ಲಾ ಸಮನ್ಸ್ ಗೂ ಬಗ್ಗದ ಜಾಕೀರ್ ನಾಯಕ್ ವಿರುದ್ಧ ಈ ವಾರದೊಳಗೆ ಜಾಮೀನು ರಹಿತ ವಾರೆಂಟ್ ನೀಡಲೂ ಸಿದ್ಧತೆ ನಡೆಯುತ್ತಿದೆ.

ಐಆರ್‌ಎಫ್ ಹೆಸರಿನಲ್ಲಿ ಸ್ಥಾಪಿಸಲಾದ ಎನ್‌ಜಿಒ, ನಂತರ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಕಾಲಿಟ್ಟು ಅಕ್ರಮ ಮಾರ್ಗಗಳಲ್ಲಿ ಹಣ ಗಳಿಸಿದೆ, ಆ ಹಣದಿಂದ ದೇಶ ವಿರೋಧಿ ಕೃತ್ಯಗಳಿಗೆ ಸಂಚು ರೂಪಿಸಿದೆ ಎಂಬ ಆರೋಪಗಳು ಬಂದಿದ್ದವು. ಇಸ್ಲಾಮಿಕ್ ಸ್ಟೇಟ್ಸ್ ನಂತಹ ಭಯೋತ್ಪಾದಕ ಸಂಘಟನೆಗಳಲ್ಲಿ ಸೇರಲು ಹಲವರನ್ನು ಪ್ರೋತ್ಸಾಗಿಸುವುದರೊಂದಿಗೆ, ಸ್ಕಾಲರ್ಷಿಪ್ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹಣ ಸಹಾಯ ಮಾಡಿದೆ ಎಂಬ ಆರೋಪಗಳೂ ಇವೆ.