ಭಾರತದಲ್ಲಿ ಮತ್ತೊಂದು ದೇಶೀಯ ಖಾಸಗಿ ವಿಮಾನಯಾನ ಸೇವೆ ಆರಂಭ

ಭಾರತದಲ್ಲಿ ಮತ್ತೊಂದು ದೇಶೀಯ ಖಾಸಗಿ ಏರ್ಲೈನ್ಸ್ ಸೇವೆ ಆರಂಭವಾಗಿದೆ. ಜೂಮ್ ಏರ್ ಎನ್ನುವ ಕಂಪನಿ ಬುಧವಾರದಿಂದ ಸ್ಥಳೀಯ ಸೇವೆಗಳನ್ನು ಆರಂಭಿಸಿದೆ. ನವದೆಹಲಿಯಿಂದ ದುರ್ಗಾಪುರ ಮೂಲಕ ಕೋಲ್ಕತಾಗೆ ವಿಮಾನ ಹಾರಾಟ ಶುರು ಮಾಡಿದೆ. ಇದರಿಂದಾಗಿ ಜೂಮ್ ಏರ್ 12 ನೇ ದೇಶೀಯ ವಿಮಾನಯಾನ ಸಂಸ್ಥೆಯಾಗಿ ಗುರುತಿಸಿಕೊಂಡಂತಾಗಿದೆ. ಷೆಡ್ಯೂಲ್ ಪ್ರಕಾರ ವಿಮಾನ ಹಾರಾಟಕ್ಕೆ ಫೆಬ್ರವರಿ 3 ರಂದು ಈ ಸಂಸ್ಥೆ ಅನುಮತಿ ಪಡೆದಿದೆ.

ಸದ್ಯ ಜೂಮ್ ಏರ್ ಲೈನ್ಸ್ ಗೆ ಮೂರು ವಿಮಾನಗಳಿದ್ದು, ನವದೆಹಲಿಯಿಂದ ಅಮೃತ್ ಸರ್, ಸೂರತ್, ಭಾವನಗರ್ ಗೆ ಹಾರಾಟ ನಡೆಸಲಿದೆ. ಶೀಘ್ರದಲ್ಲಿ ವಿಜಯವಾಡ, ತಿರುಪತಿ, ರಾಂಚಿ, ಚಂಢೀಗಢ ಗಳಿಗೆ ತನ್ನ ಸೇವೆ ವಿಸ್ತರಿಸುವುದಾಗಿ ಜೂಮ್ ಏರ್ ಎಂ.ಡಿ., ಸಿಇಒ ಕೌಸ್ತವ್ ಮೋಹನ್ ಧರ್ ಹೇಳಿದ್ದಾರೆ.